ಅಭಿಪ್ರಾಯ / ಸಲಹೆಗಳು

2017-2019ರ ವರೆಗೆನ ಕಾರ್ಯಕ್ರಮಗಳ ಪೋಟೋ

ಫೋಟೋ ಗ್ಯಾಲರಿ

 

ಅಖಿಲ ಭಾರತ ಸಾಹಿತ್ಯ ಸಮ್ಮೇಳನ - ಕಲಬುರಗಿ - ೦೫ – ೦೭. ೦೨.೨೦೨೦

೮೫ ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನವು ಕಲಬುರಗಿ ಯಲ್ಲಿ ಗುಲ್ಬರ್ಗಾ ವಿಶ್ವವಿದ್ಯಾಲಯದ ಆವರಣದಲ್ಲಿ ನಡೆಯಿತು. ಡಾ. ಎಚ್.ಎಸ್. ವೆಂಕಟೇಶಮೂರ್ತಿ ಅವರು ಸಮ್ಮೇಳನದ ಅಧ್ಯಕ್ಷತೆ ವಹಿಸಿದ್ದರು.

ಈ ಸಂದರ್ಭದಲ್ಲಿ ಕರ್ನಾಟಕ ಲಲಿತಕಲಾ ಅಕಾಡೆಮಿಯಿಂದ ಆಯೋಜಿಸಲಾಗಿದ್ದ ಕಲಾಕೃತಿಗಳ ಪ್ರದರ್ಶನ ಹಾಗೂ ಕಲಾ ಶಿಬಿರವು ಕಲಾವಿದರ ಭಾಗವಹಿಸುವಿಕೆಯಿಂದ ಯಶಸ್ವಿಗೊಂಡಿತು.

ಕರ್ನಾಟಕ ದೃಶ್ಯಕಲೆ ‘ಹೊಸ ಸಾಧ್ಯತೆಗಳು ಮತ್ತು ಹೊಸ ಪರಿಕಲ್ಪನೆಗಳು’ – ರಾಜ್ಯ ಮಟ್ಟದ ವಿಚಾರ ಸಂಕಿರಣ - ೦೭ – ೦೮. ೦೩. ೨೦೨೦

ಕರ್ನಾಟಕ ಲಲಿತಕಲಾ ಅಕಾಡೆಮಿ, ಬೆಂಗಳೂರು ಹಾಗೂ ಕರ್ನಾಟಕ ಜನಪದ ವಿಶ್ವವಿದ್ಯಾಲಯ, ಗೊಟಗೋಡಿ, ಹಾವೇರಿ ಜಿಲ್ಲೆ ಇವರ ಸಂಯುಕ್ತ ಆಶ್ರಯದಲ್ಲಿ ದಿನಾಂಕ ೦೭ ಮತ್ತು ೦೮ ಮಾರ್ಚ್ ೨೦೨೦ ರಂದು ‘ಹೊಸ ಸಾಧ್ಯತೆಗಳು ಹೊಸ ಪರಿಕಲ್ಪನೆಗಳು’ ರಾಜ್ಯ ಮಟ್ಟದ ವಿಚಾರ ಸಂಕಿರಣವು ಕರ್ನಾಟಕದ ದೃಶ್ಯಕಲೆಯ ಹಲವು ಆಯಾಮಗಳನ್ನು ಕೇಂದ್ರೀಕರಿಸಿದAತೆ ಹಿರಿಯ ವಿದ್ವಾಂಸರು, ಸಂವಾದಕರು, ಕಲಾವಿದರು, ಮತ್ತು ವಿದ್ಯಾರ್ಥಿಯರೊಡನೆ ಚರ್ಚೆ ಮತ್ತು ಉಪನ್ಯಾಸಗಳ ಮೂಲಕ ವಿಷಯಗಳನ್ನು ಹಂಚಿಕೊಂಡರು.

ಶ್ರೀ ಮಹೇಂದ್ರ. ಡಿ ಅವರ ಅಧ್ಯಕ್ಷ ಭಾಷಣದಲ್ಲಿ, “ಚಿತ್ರಕಲಾಕೃತಿಗಳು ಮಹತ್ವಪೂರ್ಣ ಮಾರ್ಗ ತೋರುವುದರ ಮೂಲಕ ಹೊಸ ವಿಚಾರಗಳಿಂದ ಜ್ಙಾನ ವಿಕಾಸಗೊಳ್ಳುತ್ತಿದೆ. ಆದ್ದರಿಂದ ಅಂಗನವಾಡಿಯಿಂದ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳಿಗೆ ಚಿತ್ರ ಬಿಡಿಸುವ ಹವ್ಯಾಸ ಮೂಡಿಸುವುದು ಅಗತ್ಯವಾಗಿದೆ”, ಎಂದು ತಮ್ಮ ಅಭಿಪ್ರಾಯಗಳನ್ನು ಹಂಚಿಕೊAಡರು. ಪ್ರೊ ಡಿ.ಬಿ. ನಾಯಕ, ಅವರು ಉಪ ಕುಲಪತಿಗಳು, ಕರ್ನಾಟಕ ಜಾನಪದ ವಿಶ್ವವಿದ್ಯಾಲಯ, ಕಾರ್ಯಕ್ರಮವನ್ನು ಉಧ್ಘಾಟಿಸಿ, “ಶಿಲ್ಪ, ಚಿತ್ರ, ಮತ್ತು ವಾಸ್ತುಶಿಲ್ಪ ಕಲೆಗಳು ಒಂದು ಕಾಲಕ್ಕೆ ಸೀಮಿತವಲ್ಲ. ಬದಲಾಗುತ್ತಿರುವ ಜಗದ ನಿಯಮಗಳಲ್ಲಿ ಕಲೆಗಳು ಕಾಲಕ್ಕೆ ತಕ್ಕಂತೆ ತನ್ನ ಮಹತ್ವವನ್ನು ಉಳಿಸಿಕೊಂಡು ಬಂದಿದೆ. ಹೀಗಾಗಿ ಕಲಾವಿದರು ಕಲಾಕೃತಿಗಳಲ್ಲಿ ಸಮಕಾಲೀನ ಹೊಸ ಪರಿಕಲ್ಪನೆಗಳನ್ನು ತರುವುದು ಅವಶ್ಯವಾಗಿದೆ”, ಎಂದು ಸಭೆಯನ್ನು ಉದ್ದೇಶಿಸಿ ಮಾತನಾಡಿದರು. ಕಲಾವಿದ ಹಾಗೂ ಕಲಾ ಸಾಹಿತಿ ಶ್ರೀ ರವಿಕುಮಾರ್ ಕಾಶಿಯವರು, “ಕಲಾವಿದ ಚಿತ್ರಗಳು ಪ್ರತಿಯೊಬ್ಬರಲ್ಲಿ ಹೊಸ ಚಿಂತನೆಗಳನ್ನು ಹುಟ್ಟುಹಾಕುತ್ತಿವೆ, ಅಂತಹ ಕೃತಿಗಳು ಬದುಕಿಗೆ ಉತ್ತಮ ಸಂದೇಶ ನೀಡಲು ಸಾಧ್ಯವಿದೆ” ಎಂದು ಹೇಳಿದರು. ಶ್ರೀ ರವಿಕುಮಾರ್ ಕಾಶಿ ಮತ್ತು ಶ್ರೀ ಕೆ.ಎನ್. ಪಾಟೀಲ್ ಅವರು ಮುಖ್ಯ ಅತಿಥಿಗಳಾಗಿ ಕಾರ್ಯಕ್ರಮದಲ್ಲಿ ಭಾಗವಹಿಸಿದರು. ಶ್ರೀ ರವಿಕುಮಾರ ಕಾಶಿಯವರು ‘ಸಮಕಾಲೀನ ಕಲೆಯಲ್ಲಿನ ಸವಾಲುಗಳು – ಸಾಧ್ಯತೆಗಳು ಒಂದು ನೋಟ’ ಎಂಬ ವಿಷಯ ಮಂಡನೆ ಮಾಡಿದರು. ಶ್ರೀ ಡಿ.ವಿ. ಕುಂದಗೋಳ ಅವರು ‘ದೃಶ್ಯಕಲೆಯ ಸಂವಾಹ ಮಾಧ್ಯಮ’ ಎಂಬ ವಿಷಯ ಕುರಿತು ಬೆಳಕನ್ನು ಚೆಲ್ಲಿದರು. ಡಾ. ಆರ್.ಎಚ್. ಕುಲಕರ್ಣಿ ಅವರು ‘ಕರ್ನಾಟಕ ಕಲೆಯ ಹೊರಹುಗಳು’ ಎಂಬ ವಿಷಯದ ತಮ್ಮ ವಿಚಾರಗಳನ್ನು ಕುರಿತು ಉಪನ್ಯಾಸ ನೀಡಿದರು. ‘ಎಂ.ಸಿ. ಚೆಟ್ಟಿ – ಕಲಾಬದುಕು’ ಕುರಿತಂತೆ ಶ್ರೀ ಎಂ. ಜೆ ಬಂಗ್ಲೇವಾಲೆ ಅವರು ಮತ್ತು ‘ರಾಗಮಾಲ ಚಿತ್ರಗಳು – ಸಮಕಾಲೀನ ಅವಲೋಕನ’ ವಿಷಯವನ್ನು ಕೇಂದ್ರೀಕರಿಸಿ ಶ್ರೀ ಮಹೇಂದ್ರ. ಡಿ, ಅವರು ವಿಶೇಷ ಉಪನ್ಯಾಸ ನೀಡಿದರು. ಸಂವಹನ ಗೋಷ್ಟಿಯಲ್ಲಿ ‘ಚಿತ್ರಕಲೆ ಮತ್ತು ವಿವಿಧ ಕ್ಷೇತ್ರಗಳ ಸಂಬAಧಗಳು’ ಎಂಬ ಬಗ್ಗೆ, ಜಾನಪದ ವಿಷಯದಲ್ಲಿ ಡಾ. ಹೆಚ್. ಬಿ. ಕೋಲಕಾರ ಅವರು, ಸಾಹಿತ್ಯ ಕ್ಷೇತ್ರಕ್ಕೆ ಕುರಿತಂತೆ ಪ್ರೊ. ಸುರೇಶ ಮುದ್ದಾರ ಅವರು ಹಾಗೂ ನೃತ್ಯವನ್ನು ಕುರಿತಂತೆ ಡಾ. ವಿದ್ಯಾ ಶಿಮ್ಲಡ್ಕ ಅವರು ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿದರು. ಸಮಾರೋಪ ಸಮಾರಂಭವನ್ನು ಪ್ರೊ. ಡಿ.ಬಿ. ನಾಯಕ ಅವರ ಗೌರವ ಉಪಸ್ಥಿತಿಯಲ್ಲಿ ಹಾಗೂ ಡಾ. ಆರ್.ಎಚ್. ಕುಲಕರ್ಣಿ ಮತ್ತು ಪ್ರೊ. ಚಂದ್ರಶೇಖರ ಅವರ ಸಮ್ಮುಖದಲ್ಲಿ ಕರ್ನಾಟಕ ಲಲಿತಕಲಾ ಅಕಾಡೆಮಿ ಅಧ್ಯಕ್ಷರಾದ ಶ್ರೀ ಮಹೇಂದ್ರ. ಡಿ ಅವರ ಸಮಾರೋಪ ನುಡಿಯೊಂದಿಗೆ ‘ಹೊಸ ಸಾಧ್ಯತೆಗಳು ಮತ್ತು ಹೊಸ ಪರಿಕಲ್ಪನೆಗಳು’ ರಾಜ್ಯ ಮಟ್ಟದ ವಿಚಾರ ಸಂಕಿರಣ ಮುಕ್ತಾಯಗೊಂಡಿತು.

 

ತರಬೇತಿ ಕಾರ್ಯಾಗಾರ - ೦೪ – ೦೬ .೦೩. ೨೦೨೦

ಕರ್ನಾಟಕ ಲಲಿತಕಲಾ ಅಕಾಡೆಮಿ, ಬೆಂಗಳೂರು ಹಾಗೂ ಭಾರತ ಸ್ಕೌರ್ಟ್ ಅಂಡ್ ಗೈಡ್, ಬೆಂಗಳೂರು, ಇವರ ಸಹಯೋಗದೊಂದಿಗೆ ವಿಶೇಷ ಘಟಕ ಉಪಯೋಜನೆಯಡಿಯಲ್ಲಿ ವಿದ್ಯಾರ್ಥಿ–ಯುವ ಕಲಾವಿದರಿಗಾಗಿ ನಡೆದ ತರಬೇತಿ ಕಾರ್ಯಾಗಾರದ ಉದ್ಘಾಟನೆ ನೆರೆವೇರಿತು.

ಕಾರ್ಯಾಗಾರದ ಅಧ್ಯಕ್ಷತೆಯನ್ನು ಕರ್ನಾಟಕ ಲಲಿತಕಲಾ ಅಕಾಡೆಮಿಯ ಅಧ್ಯಕ್ಷರಾದ ಶ್ರೀ ಮಹೇಂದ್ರ. ಡಿ, ಅವರು ವಹಿಸಿದ್ದು, ಮಾನ್ಯ ವಿಧಾನ ಪರಿಷತ್ ಸದಸ್ಯರಾದ ಶ್ರೀ ರವಿಕುಮಾರ್. ಎನ್, ಅವರು ಉದ್ಘಾಟನೆ ಮಾಡಿದರು. ಮುಖ್ಯ ಅಥಿತಿಗಳಾಗಿ ಕಲಾವಿದರಾದ ಶ್ರೀ ಎಂ.ಜಿ. ದೊಡ್ಡಮನಿಯವರು ಹಾಗೂ ಸಂಪನ್ಮೂಲ ವ್ಯಕ್ತಿಯಾಗಿ ಕಲಾವಿದರಾದ ಶ್ರೀ ದಯಾನಂದ ಕಾಮಕರ, ಅವರು ಕಾರ್ಯಕ್ರಮವನ್ನು ನಡೆಸಿಕೊಟ್ಟರು.

ಕರ್ನಾಟಕದ ವಿವಿಧ ಜಿಲ್ಲೆಗಳಿಂದ ಯುವ ಕಲಾವಿದರು ಭಾಗವಹಿಸಿ ಹಿರಿಯ ಕಲಾವಿದರಿಂದ ಕಲಾಕೃತಿಗಳ ತಂತ್ರಗಾರಿಕೆ ಹಾಗೂ ರಚನೆಯ ವಿವಿಧ ಹಂತಗಳನ್ನು ಕುರಿತಂತೆ ತರಬೇತಿ ಪಡೆದರು.

ಸಂಗ್ರಹ ಕಲಾಕೃತಿಗಳ ಕಲಾ ಪ್ರದರ್ಶನ - ೦೨.೦೩.೨೦೨೦

ಕರ್ನಾಟಕ ಲಲಿತಕಲಾ ಅಕಾಡೆಮಿ, ಬೆಂಗಳೂರು ಹಾಗೂ ಕ್ರೈಸ್ಟ್ ವಿಶ್ವವಿದ್ಯಾಲಯ, ಬೆಂಗಳೂರು, ಭಾಷಾ ವಿಭಾಗ ಇವರ ಸಹಯೋಗದೊಂದಿಗೆ ಏರ್ಪಡಿಸಿದ್ದ ಅಕಾಡೆಮಿಯ ಸಂಗ್ರಹ ಕಲಾಕೃತಿಗಳ ಕಲಾ ಪ್ರದರ್ಶನಗೊಂಡಿತ್ತು. ಕರ್ನಾಟಕ ಲಲಿತಕಲಾ ಅಕಾಡೆಮಿಯ ಸಂಗ್ರಹದಲ್ಲಿರುವ ಚಿತ್ರಕಲಾಕೃತಿಗಳನ್ನು ಅಲ್ಲಿನ ವಿದ್ಯಾರ್ಥಿ – ವಿದ್ಯಾರ್ಥಿನಿಯರು ಹಾಗೂ ಕಲಾಸಕ್ತರು ವೀಕ್ಷಿಸಿದರಲ್ಲದೆ, ಕಲಾಕೃತಿಗಳ ಬಗ್ಗೆ ತಮ್ಮ ಅನಿಸಿಕೆಗಳನ್ನು ಹಂಚಿಕೊAಡರು.

 

ರಾಷ್ಟ್ರೀಯ ಕಲಾಶಿಬಿರದ ಛಾಯಾಚಿತ್ರಗಳು - ೧೭ – ೨೧. ೦೨. ೨೦೨೦

ಕರ್ನಾಟಕ ಲಲಿತಕಲಾ ಅಕಾಡೆಮಿ ಮತ್ತು ಲವ್ಲಿ ಪ್ರೊಫಷನಲ್ ವಿಶ್ವವಿದ್ಯಾಲಯ, ಜಲಂಧರ್, ಸಹಯೋಗದೊಂದಿಗೆ ದಿನಾಂಕ ೧೭ ರಿಂದ ೨೧ ಫೆಬ್ರವರಿ ೨೦೨೦ ವರೆಗೆ ನಡೆದ ರಾಷ್ಟ್ರೀಯ ಕಲಾ ಶಿಬಿರದ ಛಾಯಾಚಿತ್ರಗಳು

ಗ್ರಾಫಿಕ್ ಕಲಾ ಕಾರ್ಯಾಗಾರ - ಉತ್ತರಕೊಪ್ಪ, ಭಟ್ಕಳ - 11–13. 02. 2020

ಕರ್ನಾಟಕ ಲಲಿತಕಲಾ ಅಕಾಡೆಮಿ ಹಾಗೂ ರತ್ನಾಕರ ವನವಾಸಿ ವಿದ್ಯಾರ್ಥಿ ನಿಲಯ, ಉತ್ತರಕೊಪ್ಪ (ವಂದಲ್ಸೆ) ಇವರ ಸಹಯೋಗದೊಂದಿಗೆ ಅಯೋಜನೆಗೊಂಡಿದ್ದ ಗ್ರಾಫಿಕ್ ಕಲೆಯ ಕಾರ್ಯಾಗಾರದಲ್ಲಿ ಕಲಾಸಕ್ತರು ಹಾಗೂ ಕಲಾವಿದರು ಭಾಗವಹಿಸಿ ಸದುಪಯೋಗ ಪಡೆದರು. ಭಟ್ಕಳ ವಿಧಾನಸಭಾ ಕ್ಷೇತ್ರದ ಮಾನ್ಯ ಶಾಸಕರಾದ ಶ್ರೀ ಸುನೀಲ್ ನಾಯ್ಕ ಅವರು ಉದ್ಘಾಟನೆ ನೆರೆವೇರಿಸಿದರು. ಮುಖ್ಯ ಅತಿಥಿಗಳಾಗಿ ಶ್ರೀ ಸೋಮಯ್ಯಗೊಂಡ ಕುಂಟವಾಣಿ, ರಾಜ್ಯ ಉಪಾಧ್ಯಕ್ಷರು, ವನವಾಸಿ ಕಲ್ಯಾಣ (ರಿ), ಕರ್ನಾಟಕ ಇವರು ಭಾಗವಹಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀ ಮಹೇಂದ್ರ. ಡಿ ಅವರು ವಹಿಸಿದರು.

ಗ್ರಾಫಿಕ್ ಕಲಾ ಕಾರ್ಯಾಗಾರದ ಸಂಪನ್ಮೂಲ ವ್ಯಕ್ತಿಯಾಗಿ ಕಲಾವಿದರಾದ ವಿ.ಜಿ. ವೇಣುಗೋಪಾಲ್ ಅವರು ಭಾಗವಹಿಸಿದ ಕರ್ನಾಟಕದ ವಿವಿಧ ಜಿಲ್ಲೆಗಳ ಯುವ ಕಲಾವಿದರಿಗೆ ಗ್ರಾಫಿಕ್ ಕಲಾ ಮಾಧ್ಯಮದಲ್ಲಿ ಕಲಾಕೃತಿ ರಚನೆಯ ವಿವಿಧ ಹಂತಗಳನ್ನು ಹಾಗೂ ತಂತ್ರಗಾರಿಕೆಯನ್ನು ಕುರಿತಂತೆ ತರಬೇತಿಯನ್ನು ನೀಡಿದರು.

"32ನೇ ತಿಂಗಳ ಚಿತ್ರ" ಕಾರ್ಯಕ್ರಮದ ಚಿತ್ರಗಳು - ೧೭.೦೧.೨೦೨೦

ಕರ್ನಾಟಕ ಲಲಿತಕಲಾ ಅಕಾಡೆಮಿಯು ಅಯೋಜಿಸಿದ್ದ ತಿಂಗಳ ಚಿತ್ರ ಕಾರ್ಯಕ್ರಮವು ಯುವ ಕಲಾವಿದರನ್ನು ಕಲಾ ವಿದ್ಯಾರ್ಥಿಗಳನ್ನು ಪ್ರೊತ್ಸಾಹಿಸಲು ಹಮ್ಮಿಕೊಂಡಿರುವ ಚಟುವಟಿಕೆಯಾಗಿದೆ. ಜನವರಿ ತಿಂಗಳ ಚಿತ್ರದಲ್ಲಿ ರಾಜ್ಯದ ಕಲಾವಿದರಾದ ವಿನೋದ್. ಎ, ಯಶೋದಾ, ಸುಜಿತ್ ಕುಮಾರ್ ಬಿ.ವಿ, ಹಾಗೂ ರವಿ ಅಂಬಣ್ಣ, ಅವರ ಕಲಾಕೃತಿಗಳ ಪ್ರದರ್ಶನವು ಅಕಾಡೆಮಿಯ ಆವರಣದಲ್ಲಿನ ವರ್ಣ ಕಲಾ ಗ್ಯಾಲರಿಯಲ್ಲಿ ನಡೆಯಿತು. ಪ್ರದರ್ಶನವನ್ನು ಪ್ರೊ. ಕಮಲಾಕ್ಷಿ ಅವರು ಉದ್ಗಾಟಿಸಿದರು. ಅಕಾಡೆಮಿ ಅಧ್ಯಕ್ಷರಾದ ಶ್ರೀ ಮಹೇಂದ್ರ. ಡಿ ಅವರು ಅಧ್ಯಕ್ಷತೆ ವಹಿಸಿದರು.

 

ವರ್ಣಆರ್ಟ್ ಗ್ಯಾಲರಿಯಲ್ಲಿ ಏರ್ಪಡಿಸಿದ್ದ "ಸಂವಾದ ಕಾರ್ಯಕ್ರಮ"ದ ಛಾಯಾಚಿತ್ರಗಳು - ೧೭.೦೧.೨೦೨೦

ಕರ್ನಾಟಕ ಲಲಿತಕಲಾ ಅಕಾಡೆಮಿಯ ವರ್ಣ ಕಲಾ ಗ್ಯಾಲರಿಯಲ್ಲಿ ‘ಸಂವಾದ ಕಾರ್ಯಕ್ರಮ” ದ ಏರ್ಪಾಡಾಗಿತ್ತು. ‘ಹೊಸ ಆಲೋಚನೆ – ಹೊಸ ಸಾಧ್ಯತೆ’ ಕುರಿತಂತೆ ಸಂವಾದದಲ್ಲಿ ಭಾಗವಹಿಸಿದ್ದ ಹಿರಿಯ ಕಲಾವಿದರು ಹಾಗೂ ಚಿತ್ರಕಲಾ ಪರಿಷತ್ತಿನ ಪ್ರಾಧ್ಯಾಪಕರಾಗಿದ್ದ ಶ್ರೀಮತಿ ಕಮಲಾಕ್ಷಿ ಅವರು, ಡಾ. ಆರ್. ಎಚ್. ಕುಲಕರ್ಣಿ, ಕಲಾ ಇತಿಹಾಸ ಪ್ರಾಧ್ಯಾಪಕರು, ಕರ್ನಾಟಕ ಚಿತ್ರಕಲಾ ಪರಿಷತ್ತು, ಹಾಗೂ ಕಲಾ ವಿಮರ್ಶಕರಾದ ಶ್ರೀ ಕೆ.ವಿ. ಸುಬ್ರಮಣ್ಯಂ ಅವರು, ಹಿರಿಯ ಹಾಗೂ ಕಿರಿಯ ಕಲಾವಿದರು ಮತ್ತು ಅಕಾಡೆಮಿಯ ಸದಸ್ಯರು, ಕಲಾಸಕ್ತರೊಂದಿಗೆ ಶ್ರೀ. ಮಹೇಂದ್ರ. ಡಿ ಅವರು ಕಾರ್ಯಕ್ರಮವನ್ನು ನಡೆಸಿಕೊಟ್ಟರು.

ರಾಜ್ಯ ಮಟ್ಟದ ಕಲಾಶಿಬಿರ - ೨೦-೨೩. ೧೨.೨೦೧೯

ಕರ್ನಾಟಕ ಲಲಿತಕಲಾ ಅಕಾಡೆಮಿ, ಬೆಂಗಳೂರು ಮತ್ತು ಮಹೇಶ ಚಿತ್ರಕಲಾ ಮಹಾವಿದ್ಯಾಲಯ, ಜಮಖಂಡಿ ಇವರ ಸಹಯೋಗದೊಂದಿಗೆ ಜಮಖಂಡಿಯಲ್ಲಿ ರಾಜ್ಯ ಮಟ್ಟದ ಕಲಾಶಿಬಿರವು ‘ಹೊಸ ಆಲೋಚನೆ – ಹೊಸ ಸಾಧ್ಯತೆ’ ಎಂಬ ಧ್ಯೇಯದೊಂದಿಗೆ ಏರ್ಪಾಡಾಗಿತ್ತು. ರಾಜ್ಯದ ವಿವಿಧ ಜಿಲ್ಲೆಗಳಿಂದ ಕಲಾವಿದರು ಭಾಗವಹಿಸಿ ಕಲಾಶಿಬಿರವನ್ನು ಯಶಸ್ವಿಗೊಳಿಸಿದರು. ಕಲಾಶಿಬಿರವನ್ನು ಅಂತರಾಷ್ಟಿçÃಯ ವರ್ಣಶಿಲ್ಪಿ ಹಾಗೂ ಹಿರಿಯ ಕಲಾವಿದರಾದ ಶ್ರೀ ವಿಜಯ ಸಿಂಧೂರ ಅವರು ಉಧ್ಘಾಟಿಸಿ, “ಚಿತ್ರಕಲೆ ಬಹಳ ಶ್ರೇಷ್ಠ ಕಲೆಯಾಗಿದ್ದು ಎಲ್ಲರೂ ಕಲಿತುಕೊಳ್ಳಬೇಕು; ನಮ್ಮ ಕಲೆ ನಮ್ಮ ಜೀವನಕ್ಕೆ ಒಳ್ಳೆಯ ತಿರುವು ನೀಡಬೇಕು”, ಎಂದು ಕಲಾಸಕ್ತರನ್ನು ಹಾಗೂ ಕಲಾವಿದರನ್ನು ಉದ್ದೇಶಿಸಿ ಮಾತನಾಡಿದರು.

“ಕಲೆಗಾರಿಕೆಯಿಂದ ಕಣ್ಣುಗಳು ಅರಳಬೇಕು”, ಎಂದು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶ್ರೀ ಮಹೇಂದ್ರ ಅವರು ಇಂದಿನ ದಿನಗಳಲ್ಲಿ ಕಲೆಯ ಬಗ್ಗೆ ಆಸಕ್ತಿ ಕಡಿಮೆಯಾಗುತ್ತಿರುವುದನ್ನು ಕುರಿತು ಕಳವಳ ವ್ಯಕ್ತಪಡಿಸಿ, ಸರ್ಕಾರವು ಪ್ರಾಥಮಿಕ ಶಾಲೆಗಳಲ್ಲಿ ಚಿತ್ರಕಲಾ ಶಿಕ್ಷಕರನ್ನು ನೇಮಕ ಮಾಡುವುದರ ಮೂಲಕ ಈ ಕೊರತೆಯನ್ನು ಸರಿಪಡಿಸಬಹುದು ಹಾಗೂ ಕಲಾವಿದರು ಈ ನಿಟ್ಟಿನಲ್ಲಿ ಕೆಲಸ ಮಾಡಬೇಕೆಂದು ಕರೆ ನೀಡಿದರು. ಕಲಾಶಿಬಿರದ ಉದ್ಘಾಟನಾ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಪ್ರೊ. ಎಸ್.ಎಚ್ ಲಗಳಿ ಮತ್ತು ಡಾ. ಎಂ.ಬಿ. ಮೂಲಿಮನಿಯವರು ಭಾಗವಹಿಸಿದರು. ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಶ್ರೀ ಅರುಣ್ ಕುಮಾರ ಶಹಾ, ಶ್ರೀ ಟಿ.ಪಿ. ಬಾಂಗಿ, ಶ್ರೀ ಪಿ.ಎಸ್. ಕಡೇಮನಿ ಹಾಗೂ ಶ್ರೀ ಗರೀಶ ಹಂಪಣ್ಣನವರು ಉಪಸ್ಥಿತರಿದ್ದು, ಶ್ರೀ ಮಹೇಂದ್ರರವರು ಅಧ್ಯಕ್ಷತೆ ವಹಿಸಿದರು.

ನೂತನವಾಗಿ ನೇಮಕಗೊಂಡ ಅಧ್ಯಕ್ಷರು ಮತ್ತು ಸದಸ್ಯರುಗಳಿಗೆ ಸ್ವಾಗತ, ಪದಗ್ರಹಣ ಕಾರ್ಯಕ್ರಮ - ೧೮.೧೦.೨೦೧೯

ನೂತನವಾಗಿ ನೇಮಕಗೊಂಡ ಅಧ್ಯಕ್ಷರು ಮತ್ತು ಸದಸ್ಯರುಗಳಿಗೆ ಸ್ವಾಗತ, ಪದಗ್ರಹಣ ಹಾಗೂ ಅನೌಪಚಾರಿಕವಾಗಿ ಸಭೆಯನ್ನು ಮಾನ್ಯ ಇಲಾಖಾ ಸಚಿವರ ಅಧ್ಯಕ್ಷತೆಯಲ್ಲಿ ದಿನಾಂಕ:18-10-2019 ರಂದು ಬೆಳಗ್ಗೆ:11:00ಗಂಟೆಗೆ ವಿಕಾಸ ಸೌಧ, ಬೆಂಗಳೂರು ಇಲ್ಲಿ ಏರ್ಪಡಿಸಿರುವ ಕಾರ್ಯಕ್ರಮದ ಛಾಯಾಚಿತ್ರಗಳು.

ಇತ್ತೀಚಿನ ನವೀಕರಣ​ : 06-02-2021 04:15 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಕರ್ನಾಟಕ ಲಲಿತಕಲಾ ಅಕಾಡೆಮಿ
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080