ಅಭಿಪ್ರಾಯ / ಸಲಹೆಗಳು

ನಮ್ಮ ಬಗ್ಗೆ

೧೯೬೧ ರಲ್ಲಿ ಕರ್ನಾಟಕ ಲಲಿತಕಲಾ ಅಕಾಡೆಮಿಯು ಬೆಂಗಳೂರಿನಲ್ಲಿ ಅಸ್ತಿತ್ವಕ್ಕೆ ಬಂದಿತು. ಪ್ರಾರಂಭದಲ್ಲಿ ಕಲಾಕೃತಿಗಳ ಪ್ರದರ್ಶನಗಳನ್ನು ಅಲ್ಪ ಪ್ರಮಾಣದಲ್ಲಿ ಏರ್ಪಡಿಸುವುದರೊಂದಿಗೆ ತನ್ನ ಕಲಾ ಚಟುವಟಿಕೆಗಳ ಮೂಲಕ ಕಾರ್ಯಾರಂಭಮಾಡಿತು. ಕರ್ನಾಟಕ ಸರ್ಕಾರವು ೧೯೬೪ರಲ್ಲಿ ಕರ್ನಾಟಕ ಲಲಿತಕಲಾ ಅಕಾಡೆಮಿಯನ್ನು ಅಧಿಕೃತವಾಗಿ ಸ್ಥಾಪಿಸಿ, ಅಂದಿನ ಶಿಕ್ಷಣ ಸಚಿವರಾದ ಶ್ರೀ ಎಸ್. ಆರ್. ಕಂಠಿ ಅವರನ್ನು ಅಕಾಡೆಮಿಯ ಅಧ್ಯಕ್ಷರನ್ನಾಗಿ ನೇಮಿಸಿತು; ಅವರು ೧೯೬೪ ರಿಂದ ೧೯೬೭ ರವರೆಗೆ ಕಾರ್ಯನಿರ್ವಹಿಸಿದರು.

೧೯೭೪ರಲ್ಲಿ ನಾಡಿನ ಹಿರಿಯ ಪ್ರಸಿದ್ಧ ಕಲಾವಿದರಾದ ಶ್ರೀ ಕೆ.ಕೆ. ಹೆಬ್ಬಾರ್ ಅವರು ಅಕಾಡೆಮಿಯ ನೇತೃತ್ವ ವಹಿಸಿಕೊಂಡ ಮೇಲೆ ನಾಡಿನ ಕಲಾಲೋಕದ ಚಿತ್ರಣವು ಬದಲಾಯಿತು. ಮುಂದೆ ಅನೇಕ ಮಹನೀಯರು ಅಕಾಡೆಮಿಯ ಭವ್ಯ ಭವಿಷ್ಯದ ನಿರ್ಮಾಣದಲ್ಲಿ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದರು.

ಇಂದು ರಾಜ್ಯ ಸರ್ಕಾರವು ಯುವಕರಿಗೆ ಆದ್ಯತೆ ನೀಡಬೇಕೆಂಬ ಹಿನ್ನೆಲೆಯಲ್ಲಿ ಯುವ ನೇತೃತ್ವ ಅಕಾಡೆಮಿಗೆ ಲಭಿಸಿದೆ. ಹೊಸ ಸಾಧ್ಯತೆಗಳು – ಹೊಸ ಪರಿಕಲ್ಪನೆಗಳು ಎಂಬ ಘೋಷ ವಾಕ್ಯದೊಂದಿಗೆ ಕಾರ್ಯ ಆರಂಭಿಸಿರುವ ಅಕಾಡೆಮಿಯ ಹೊಸ ಯೋಜನೆಗಳು, ವಿನೂತನ ಕಾರ್ಯರೂಪಗಳು ನಾಡಿನ ಕಲಾ ಕ್ಷಿತಿಜದಲ್ಲಿ ಹೊಸ ಆಶಾ ಭಾವನೆ – ವಿಶ್ವಾಸ ನಿರ್ಮಿಸಲಿದೆ.

ಇತ್ತೀಚಿನ ನವೀಕರಣ​ : 15-02-2021 05:10 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಕರ್ನಾಟಕ ಲಲಿತಕಲಾ ಅಕಾಡೆಮಿ
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080